Thursday 15 May 2014

               "ಮಾನವನ ಅಗೋಚರಿತ ಮಿತ್ರನೇ ದೇವರು "

ಭೂಮಿಯ ಈ ಇತಿಹಾಸವು ಐದು ಬಿಲಿಯನ್ ವರ್ಷಗಳಾಗಿದ್ದು; ಪ್ರಚಲಿತ ದಿನಗಳಲ್ಲಿ ದೇವರ ಮೆಲೆ ಅಪಾರ ನಂಬಿಕೆಯನ್ನು ಮಾನವ ಹೊಂದಿದ್ದಾನೆ.ಒಂದು ಬೆಂಕಿಯುಂಡೆಯು ಭೂಮಿಯಾಗಿ ಮಾಪರ್ಾಡಾಗಿ ತದನಂತರ ಜೀವಿಗಳಿಂದ ಕೂಡಿದ ಒಂದು ಗ್ರಹವಾಯಿತು. ಮಾನವನೋಬ್ಬನೇ ಪ್ರಭಲ(Dominent) ಆಗಿ ಇತರ ಪ್ರಾಣಿಗಳನ್ನು ಕಡೆಗಾಣಿಸಿದ. ಈ ಒಂದು ವಿಷಯದಲ್ಲಿ ಮೂಡುವ ಪ್ರಶ್ನೆ ದೇವರನ್ನು ನಂಬುವುದು ಮನುಷ್ಯರು ಮಾತ್ರವೇ? ಹೌದು, ವೈಜ್ಞಾನಿಕ ದೃಷ್ಠಿಯಲ್ಲಿ ದೇವರ ಇರುವಿಕೆಗೆ ಯಾವುದೇ ಪುರಾವೆಗಳೂ ಇಲ್ಲ. ಹೀಗಿದ್ದರೂ ದೇವರ ಮೇಲಿನ ನಂಬಿಕೆ ಮಾತ್ರ ಸ್ಥಿರವಾಗಿದೆ.

ಮಾನವ ತನ್ನ ಮತ್ತು ತಮ್ಮ ಸಮಾಜದ ಒಳಿತಿಗೆ ಹಲವಾರು ಹಕ್ಕು-ಬಾದ್ಯತೆಗಳನ್ನು ಸೃಷ್ಠಿಸಿಕೊಂಡ. ಧರ್ಮವನ್ನು ಪಾಲಿಸಲು ಅಧರ್ಮವನ್ನು ನಿಲ್ಲಿಸಲು ಕಂಡುಕೊಂಡ ಸರ್ವತೋಮುಖ ಮಾರ್ಗವೆಂದರೆ ಅದು ದೇವರ ಮೇಲಿನ ನಂಬಿಕೆ. ಆ ದಿನದಂದ ಮಾನವನ ಕೆಟ್ಟ ಕಾರ್ಯಗಳ ಗಣತಿಯು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಈ ಒಂದು ಒಳಿತಿನಿಂದ ದೇವರಿಗೆ ಅಗ್ರಸ್ಠಾನವನ್ನೇ ನೀಡಿದ.

    ತಾವು ಬಗೆಹರಿಸಲಾಗದ ಹಲವಾರು ತೊಂದರೆಗಳನ್ನು ದೇವರ ಮುಂದೆ ಇಡಲು ಪ್ರಾರಂಭಿಸಿದ. ಒಂದು ತೊಂದರೆಯಿಂದ ಹೊರ ಬರಲು ಸಾದ್ಯವಾಗುವುದು ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ.
ಈ ರೀತಿ ತನ್ನ ಹಲವಾರು ಕಷ್ಟಗಳು ಒಂದಾದ ಮೇಲೊಂದು ಬಗೆಹರಿಯತೊಡಗಿದವು . ಇದನ್ನರಿತ ಮಾನವನಲ್ಲಿ ದೇವರ ಬಗೆಗಿನ ಭಕ್ತಿ(ನಂಬಿಕೆ)ಯು ಮತ್ತéಷ್ಟು ಹೆಚ್ಚಿತು. ಗಮನಿಸಬೇಕಾದ ವಿಷಯವೆಂದರೆ ದೇವರ ಈ ಒಂದು ನಂಬಿಕೆಯಲ್ಲಿ ಮಾನವನು ತನ್ನ ಕಷ್ಟಗಳನ್ನು ತಾನೇ ಬಗೆಹರಿಸಿಕೊಂಡಿರುತ್ತಾನೆ. ಆದರೆ ಅದು ಮಾತ್ರ ಮಾನವನಿಗೆ ತಿಳಿಯುವುದಿಲ್ಲ. ಅದರ ಶ್ರೇಯವು ಮಾತ್ರ ದೇವರಿಗೆ ಸಲ್ಲಿಸುತ್ತಾನೆ. ತನ್ನ ಎಲ್ಲಾ ಕಷ್ಟಗಳನ್ನು ಮರೆತು ಧೈರ್ಯದಿಂದ ಪರಿಶ್ರಮಪಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ. ಈ ಧೈರ್ಯವು ಬರುವುದು ಮಾತ್ರ ದೇವರ ನಂಬಿಕೆಯಿಂದಷ್ಟೆ. ಆ ಒಂದು ಶಬ್ದ "ಎಲ್ಲದಕ್ಕೂ ದೇವರಿದ್ದಾನೆ ಬಿಡು" ಎಂಬುದು.

ವಿನಾಕಾರಣ ತನ್ನ ಜೀವನದಲ್ಲಿ ಒಳಿತಾಗುತ್ತಿದ್ದರೆ ದೇವರನ್ನೇಕೆ ಕಡೆಗಾಣಿಸಬೇಕು..?!! ದೇವರನ್ನು ನಂಬಬೇಕು; ಮೂಡನಂಬಿಕೆಯನ್ನಲ್ಲ. ದೇವರೇ ಇಲ್ಲ. ಎಂದು ವಾದ ಮಾಡಿ ತನ್ನ ಎಲ್ಲ ಕಷ್ಟಗಳನ್ನು ತಾನೇ ಅನುಭವಿಸುತ್ತಾ ಯಾವ ಕಷ್ಟಗಳಿಂದಲೂ ಹೊರಬರದೆ ಒಂಟಿಯಾಗಿರುವುದಕ್ಕಿಂತ ಉತ್ತಮ ಮಾರ್ಗ ದೇವರನ್ನು ನಂಬುವುದು. ದೇವರನ್ನು ತನ್ನ ಆತ್ಮದ ಅಗೋಚರಿತ ಮಿತ್ರನನ್ನಾಗಿ ಮಾಡಿಕೊಳ್ಳುವುದು. ಎಲ್ಲ ದುಃಖ-ದುಮ್ಮಾನಗಳನ್ನು ದೇವರ ಬಳಿ ಇಡುವುದೊಂದೇ ಬುಧ್ಧಿವಂತಿಕೆಯ ಪರಮೋತ್ತಮ ಮಾರ್ಗ. 

                                                                         -Naveen N  15-MAY-2014

No comments:

Post a Comment