Monday, 26 May 2014

                                                       "ನಗರ ಜೀವನದ ಆಕರ್ಷಣೆ"    
     ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸುವ ತಂದೆ-ತಾಯಿ ತಮ್ಮ ಮಕ್ಕಳಿಂದ ಬಯಸುವುದು ಕೊನೆಗಾಲದ ಆಸರೆಯಷ್ಟೇ. ಮಕ್ಕಳು ವಿಧ್ಯಾಬ್ಯಾಸದ ನೆಪದಲ್ಲಿ ಪಟ್ಟಣ ಸೇರುತ್ತಾರೆ. ಅಲ್ಲಿನ ಜೀವನಕ್ಕೆ ಬೇಗ ಒಗ್ಗುವ ಮಕ್ಕಳು ಕೊನೆಗೊಂದು ದಿನ ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡು ಅಲ್ಲೇ ಸೆಟ್ಲಾಗುತ್ತಾರೆ. ವಯಸ್ಸಾದ ತಂದೆ-ತಾಯಿ ಹಳ್ಳಿಯಲ್ಲಿಯೇ ಉಳಿಯಬೇಕಾಗುತ್ತದೆ.
ತಮ್ಮ ಹೆಂಡತಿ-ಮಕ್ಕಳೊಂದಿಗೆ ಬ್ಯುಸಿಯಾಗುವ ಮಕ್ಕಳು ತಮ್ಮ ತಂದೆ-ತಾಯಿ ಯನ್ನು ನೋಡಲೂ ಮರೆಯುತ್ತಾರೆ. ತಮ್ಮ ಮಕ್ಕಳು ಏಲ್ಲೋ ಖುಷಿಯಾಗಿರುವುದನ್ನು ಕಂಡು ಕೊನೆಯ ಕ್ಷಣಗಳನ್ನು ಕಳೆಯುತ್ತಾರೆ. ಎಲ್ಲರ ಮನೆಯ ದೋಸೆ ತೂತು ಎಂಬಂತೆ  ಎಲ್ಲರ ಮನೆಯಲ್ಲಿ ನಡೆಯುವುದು ಇಷ್ಟೇ. ಒಮ್ಮೆ ಜನಗಣತಿ ದಾಖಲೆಯನ್ನು ಗಮನಿಸಿದರೆ ನಮಗೆ ತಿಳಿಯುವ ಸತ್ಯ ಹಳ್ಳಿಗಳಲ್ಲೇ ಅತಿ ಹೆಚ್ಚು ವೃಧ್ದರಿರುವುದೆಂದು. ಹೀಗಾಗಿ ಹಳ್ಳಿಗಳು ವೃಧ್ಧಾಶ್ರಮಗಳಂತೆ ಕಾಣುತ್ತಿವೆ. ಇನ್ನು ಮುಂದಾದರು ತಂದೆ-ತಾಯಿ ಯನ್ನು ಒಂಟಿಯಾಗಿ ಬಿಡದೆ ಅವರ ಕೊನೆಗಾಲಕ್ಕೆ ಆಸರೆಯಾಗಲಿ ಎಂದು ಬಯಸುತ್ತೇನೆ.
                                                                                -ನವೀನ್.ಎನ್ ಗೌರಿಬಿದನೂರು.


Published in Kannadaprabha dated: 06/01/2014

Thursday, 15 May 2014

               "ಮಾನವನ ಅಗೋಚರಿತ ಮಿತ್ರನೇ ದೇವರು "

ಭೂಮಿಯ ಈ ಇತಿಹಾಸವು ಐದು ಬಿಲಿಯನ್ ವರ್ಷಗಳಾಗಿದ್ದು; ಪ್ರಚಲಿತ ದಿನಗಳಲ್ಲಿ ದೇವರ ಮೆಲೆ ಅಪಾರ ನಂಬಿಕೆಯನ್ನು ಮಾನವ ಹೊಂದಿದ್ದಾನೆ.ಒಂದು ಬೆಂಕಿಯುಂಡೆಯು ಭೂಮಿಯಾಗಿ ಮಾಪರ್ಾಡಾಗಿ ತದನಂತರ ಜೀವಿಗಳಿಂದ ಕೂಡಿದ ಒಂದು ಗ್ರಹವಾಯಿತು. ಮಾನವನೋಬ್ಬನೇ ಪ್ರಭಲ(Dominent) ಆಗಿ ಇತರ ಪ್ರಾಣಿಗಳನ್ನು ಕಡೆಗಾಣಿಸಿದ. ಈ ಒಂದು ವಿಷಯದಲ್ಲಿ ಮೂಡುವ ಪ್ರಶ್ನೆ ದೇವರನ್ನು ನಂಬುವುದು ಮನುಷ್ಯರು ಮಾತ್ರವೇ? ಹೌದು, ವೈಜ್ಞಾನಿಕ ದೃಷ್ಠಿಯಲ್ಲಿ ದೇವರ ಇರುವಿಕೆಗೆ ಯಾವುದೇ ಪುರಾವೆಗಳೂ ಇಲ್ಲ. ಹೀಗಿದ್ದರೂ ದೇವರ ಮೇಲಿನ ನಂಬಿಕೆ ಮಾತ್ರ ಸ್ಥಿರವಾಗಿದೆ.

ಮಾನವ ತನ್ನ ಮತ್ತು ತಮ್ಮ ಸಮಾಜದ ಒಳಿತಿಗೆ ಹಲವಾರು ಹಕ್ಕು-ಬಾದ್ಯತೆಗಳನ್ನು ಸೃಷ್ಠಿಸಿಕೊಂಡ. ಧರ್ಮವನ್ನು ಪಾಲಿಸಲು ಅಧರ್ಮವನ್ನು ನಿಲ್ಲಿಸಲು ಕಂಡುಕೊಂಡ ಸರ್ವತೋಮುಖ ಮಾರ್ಗವೆಂದರೆ ಅದು ದೇವರ ಮೇಲಿನ ನಂಬಿಕೆ. ಆ ದಿನದಂದ ಮಾನವನ ಕೆಟ್ಟ ಕಾರ್ಯಗಳ ಗಣತಿಯು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಈ ಒಂದು ಒಳಿತಿನಿಂದ ದೇವರಿಗೆ ಅಗ್ರಸ್ಠಾನವನ್ನೇ ನೀಡಿದ.

    ತಾವು ಬಗೆಹರಿಸಲಾಗದ ಹಲವಾರು ತೊಂದರೆಗಳನ್ನು ದೇವರ ಮುಂದೆ ಇಡಲು ಪ್ರಾರಂಭಿಸಿದ. ಒಂದು ತೊಂದರೆಯಿಂದ ಹೊರ ಬರಲು ಸಾದ್ಯವಾಗುವುದು ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ.
ಈ ರೀತಿ ತನ್ನ ಹಲವಾರು ಕಷ್ಟಗಳು ಒಂದಾದ ಮೇಲೊಂದು ಬಗೆಹರಿಯತೊಡಗಿದವು . ಇದನ್ನರಿತ ಮಾನವನಲ್ಲಿ ದೇವರ ಬಗೆಗಿನ ಭಕ್ತಿ(ನಂಬಿಕೆ)ಯು ಮತ್ತéಷ್ಟು ಹೆಚ್ಚಿತು. ಗಮನಿಸಬೇಕಾದ ವಿಷಯವೆಂದರೆ ದೇವರ ಈ ಒಂದು ನಂಬಿಕೆಯಲ್ಲಿ ಮಾನವನು ತನ್ನ ಕಷ್ಟಗಳನ್ನು ತಾನೇ ಬಗೆಹರಿಸಿಕೊಂಡಿರುತ್ತಾನೆ. ಆದರೆ ಅದು ಮಾತ್ರ ಮಾನವನಿಗೆ ತಿಳಿಯುವುದಿಲ್ಲ. ಅದರ ಶ್ರೇಯವು ಮಾತ್ರ ದೇವರಿಗೆ ಸಲ್ಲಿಸುತ್ತಾನೆ. ತನ್ನ ಎಲ್ಲಾ ಕಷ್ಟಗಳನ್ನು ಮರೆತು ಧೈರ್ಯದಿಂದ ಪರಿಶ್ರಮಪಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ. ಈ ಧೈರ್ಯವು ಬರುವುದು ಮಾತ್ರ ದೇವರ ನಂಬಿಕೆಯಿಂದಷ್ಟೆ. ಆ ಒಂದು ಶಬ್ದ "ಎಲ್ಲದಕ್ಕೂ ದೇವರಿದ್ದಾನೆ ಬಿಡು" ಎಂಬುದು.

ವಿನಾಕಾರಣ ತನ್ನ ಜೀವನದಲ್ಲಿ ಒಳಿತಾಗುತ್ತಿದ್ದರೆ ದೇವರನ್ನೇಕೆ ಕಡೆಗಾಣಿಸಬೇಕು..?!! ದೇವರನ್ನು ನಂಬಬೇಕು; ಮೂಡನಂಬಿಕೆಯನ್ನಲ್ಲ. ದೇವರೇ ಇಲ್ಲ. ಎಂದು ವಾದ ಮಾಡಿ ತನ್ನ ಎಲ್ಲ ಕಷ್ಟಗಳನ್ನು ತಾನೇ ಅನುಭವಿಸುತ್ತಾ ಯಾವ ಕಷ್ಟಗಳಿಂದಲೂ ಹೊರಬರದೆ ಒಂಟಿಯಾಗಿರುವುದಕ್ಕಿಂತ ಉತ್ತಮ ಮಾರ್ಗ ದೇವರನ್ನು ನಂಬುವುದು. ದೇವರನ್ನು ತನ್ನ ಆತ್ಮದ ಅಗೋಚರಿತ ಮಿತ್ರನನ್ನಾಗಿ ಮಾಡಿಕೊಳ್ಳುವುದು. ಎಲ್ಲ ದುಃಖ-ದುಮ್ಮಾನಗಳನ್ನು ದೇವರ ಬಳಿ ಇಡುವುದೊಂದೇ ಬುಧ್ಧಿವಂತಿಕೆಯ ಪರಮೋತ್ತಮ ಮಾರ್ಗ. 

                                                                         -Naveen N (8th sem,UVCE,9731722408)